ವಿಟ್ಲ: ವಿಟ್ಲದಲ್ಲಿ ನೀರಿನ ಸಮಸ್ಯೆ: ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪುತ್ತೂರು ಶಾಸಕರಿಗೆ ಮನವಿ
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗಾಗಿ ವಿಟ್ಲದ ನಾಗರಿಕರ ಪರವಾಗಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ವಿ.ಕೆ.ಎಂ. ಅಶ್ರಫ್ ಇವರ ಮೂಲಕ ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ಇವರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಹೊರೈಝನ್ ಶಾಲೆಯ ಕಾರ್ಯದರ್ಶಿ ನ್ಯಾಯವಾದಿ ಮತ್ತು ನೋಟರಿ ಕೆ. ಅಬೂಬಕರ್ ವಿಟ್ಲ, ಉದ್ಯಮಿ ಸುಬ್ರಾಯ ಪೈ, ಎಂ.ಎಸ್. ಮಹಮ್ಮದ್, ಲಯನ್ಸ್ ಕ್ಲಬ್ಬಿನ ಮಂಗೇಶ್ ಭಟ್, ಪಂಚಾಯತ್ ಸದಸ್ಯ ವಿ.ಕೆ.ಎಂ.ಅಶ್ರಫ್, ರಮನಾಥ ವಿಟ್ಲ, ಕೊಲ್ಯ ಶ್ರೀನಿವಾಸ್ ಶೆಟ್ಟಿ, ಎನ್.ಎಸ್. ಬಿ. ಅಶೋಕ್ ಮಂಗಿಲಪದವು, ಡಿ.ಎಂ. ರಶೀದ್ ಉಕ್ಕುಡ, ಇಸ್ಮಾಯಿಲ್ ಕಾನತಡ್ಕ, ಶ್ರೀಧರ್ ಬಾಳೆಕಲ್ಲು, ವಿಟ್ಲ ಪಂಚಾಯತ್ ನ ಮುಖ್ಯಾಧಿಕಾರಿ ಗೋಪಾಲ ನಾಯ್ಕ್ ಹಾಗೂ ಇತರರು ಉಪಸ್ಥಿತರಿದ್ದರು.
ಮನವಿಯನ್ನು ಸ್ವೀಕರಿಸಿದ ಶಾಸಕರು ಈ ಬಗ್ಗೆ ಈಗಾಗಲೇ ಕಾರ್ಯ ಪ್ರವರ್ತನಾಗಿದ್ದೇನೆ. ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ನೀರಿನ ವ್ಯವಸ್ಥೆ ಕಲ್ಪಿಸುವ ಪ್ರಯತ್ನದಲ್ಲಿ ಇದ್ದೇನೆ ಎಂದು ಭರವಸೆ ನೀಡಿರುತ್ತಾರೆ.



