March 22, 2026

ಕಾರು, ಟ್ರಕ್ ನಡುವೆ ಅಪಘಾತ: ಒಂದೇ ಕುಟುಂಬದ 7 ಮಂದಿ ಮೃತ್ಯು

0
image_editor_output_image429058961-1694410949680.jpg

ಅಸ್ಸಾಂ: ಕಾರು ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಘಟನೆ ಅಸ್ಸಾಂನ ದಿಬ್ರುಗಢದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಸತೀಶ್ ಕುಮಾರ್ ಅಗರ್ವಾಲ್ (45), ಪಾಂಪೆ ಅಗರ್ವಾಲ್ (42), ಕೃಷ್ಣ ಕುಮಾರ್ ಅಗರ್ವಾಲ್ (25), ನಿರ್ಮಲ್ ಕುಮಾರ್ ಅಗರ್ವಾಲ್ (70), ಪುಷ್ಪಾ ಸುರೇಖಾ ಅಗರ್ವಾಲ್ (65), ನಮಲ್ ಅಗರ್ವಾಲ್ ಮತ್ತು ಗೋಲೋ ಅಗರ್ವಾಲ್ ಎಂದು ಗುರುತಿಸಲಾಗಿದೆ.

ಪ್ರಯಾಣಿಕರನ್ನು ಹೊತ್ತ ಟೊಯೊಟಾ ಇನ್ನೋವಾಕಾರು ಲೆಪ್ಟಕಟ್ಟಾ ಪ್ರದೇಶ ತಲುಪುವಾಗ ಹರಿಯಾಣ ನಂಬರ್ ಪ್ಲೇಟ್ ಹೊಂದಿದ್ದ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಈ ಭೀಕರ ಘಟನೆಯಲ್ಲಿ ಕುಟುಂಬದ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರರು ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!