August 26, 2026

ಬಂಟ್ವಾಳ: ಅಂದರ್ ಬಾಹರ್ ಅಡ್ಡೆ ಮೇಲೆ ಪೊಲೀಸ್ ದಾಳಿ: 10 ಮಂದಿ ವಶಕ್ಕೆ

0
IMG-20230504-WA0062.jpg

ಬಂಟ್ವಾಳ: ಅಕ್ರಮವಾಗಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ಹತ್ತು ಮಂದಿಯನ್ನು ವಶಕ್ಕೆ ಪಡೆದ ಘಟನೆ ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ನಡೆದಿದೆ.

ಆರೋಪಿಗಳನ್ನು ಜಯಕುಮಾರ್, ಗಂಗಾಧರ, ಕಿರಣ್ ಕುಮಾರ್, ಜಯರಾಮ, ಶೈಲೇಶ್, ಪ್ರಕಾಶ, ರಮಾನಾಥ, ಅಶ್ವತ್ಥ, ಲಕ್ಷ್ಮಣ, ಡೋಗ್ರಾ ಎಂದು ಗುರುತಿಸಲಾಗಿದೆ.

ಆರೋಪಿಗಳು ಜೂಜಾಟವಾಡಲು ಉಪಯೋಗಿಸಿದ ಇಸ್ಪೀಟು ಎಲೆಗಳು, ಚಾರ್ಜರ್ ಲೈಟ್ ಹಾಗೂ 7520 ರೂ. ನಗದು ವಶಕ್ಕೆ ಪಡೆದಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!