March 22, 2026

ಮುಲ್ಕಿ: ನಿವೃತ್ತ ಶಿಕ್ಷಕ ಹೃದಯಾಘಾತದಿಂದ ನಿಧನ

0
IMG-20230910-WA0024.jpg

ಮುಲ್ಕಿ: ಪಡುಪಣಂಬೂರು ಬೆಳ್ಳಾಯರು ಗೋಂಟು ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣರಾವ್ (63) ಅವರು ಹೃದಯಾಘಾತದಿಂದ ನಿಧನರಾಗಿರುವ ಘಟನೆ ನಡೆದಿದೆ.

ಕೃಷ್ಣರಾವ್ ಅವರು ಕಳೆದ ಹಲವಾರು ವರ್ಷಗಳಿಂದ ಪುನರೂರು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬೆಳ್ಳಾಯರು ಶ್ರೀ ಚಂದ್ರ ಮೌಳೀಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಹಳಷ್ಟು ಶ್ರಮಿಸಿದ್ದರು.ಬೆಳ್ಳಾಯರು ಗೋಂಟು ಪುತ್ರನ್ ಮೂಲ ಸ್ಥಾನದ ಸಹ ಅರ್ಚಕರಾಗಿ, ಕೆಂಚನಕೆರೆ ಹಾಲು ಉತ್ಪಾದಕರ ಸಂಘದ ಸದಸ್ಯರಾಗಿ, ಹೈನುಗಾರರಾಗಿ, ಕೃಷಿಕರಾಗಿ, ಉತ್ತಮ ಸಾಮಾಜಿಕ ಕಾರ್ಯಕರ್ತರಾಗಿ ಕೊಡುಗೈದಾನಿಯಾಗಿ ಜನಾನುರಾಗಿಯಾಗಿದ್ದರು.

ಇನ್ನು ಕೃಷ್ಣರಾವ್ ಅವರು ಪತ್ನಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!