ದಾಖಲೆಗಳನ್ನು ಮುರಿದ ಶಾರುಖ್ ಖಾನ್ ಅವರ ‘ಜವಾನ್ʼ ಸಿನಿಮಾ: 2ನೇ ದಿನದಲ್ಲಿ ಗಳಿಸಿದ್ದು ಎಷ್ಟು ಕೋಟಿ ರೂ. ಗೊತ್ತೇ?
ಮುಂಬಯಿ: ಶಾರುಖ್ ಖಾನ್ ಅವರ ʼಜವಾನ್ʼ ಸಿನಿಮಾ ದಾಖಲೆಗಳನ್ನು ಮುರಿದು ಇತಿಹಾಸವನ್ನು ಬರೆಯಲು ಮುಂದಾಗುತ್ತಿದೆ. ಸಿನಿಮಾ ರಿಲೀಸ್ ಆಗಿ ಎರಡು ದಿನಗಳು ಕಳೆದಿದ್ದು, ಈ ಎರಡು ದಿನಗಳಲ್ಲಿ ಈಗಾಗಲೇ ಹಲವು ದಾಖಲೆಗಳು ಬ್ರೇಕ್ ಆಗಿವೆ.
ಕಿಂಗ್ ಖಾನ್ ಬಾಕ್ಸ್ ಆಫೀಸ್ ಕಿಂಗ್ ಆಗಿ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಮೊದಲ ದಿನವ ʼಜವಾನ್ʼ 129.06 ಕೋಟಿ ರೂಪಾಯಿಯನ್ನು ಗಳಿಸಿತ್ತು. ಆ ಮೂಲಕ ಭಾರತ ಸಿನಿರಂಗದಲ್ಲಿ ಬಿಗ್ ಓಪನಿಂಗ್ ಪಡೆದುಕೊಂಡ ಹಿಂದಿ ಸಿನಿಮಾವಾಗಿ ʼಜವಾನ್ʼ ಹೊರಹೊಮ್ಮಿದೆ. ಇದೀಗ ಎರಡನೇ ದಿನವೂ ಅದೇ ರೀತಿಯ ಆರಂಭವನ್ನು ಪಡೆದುಕೊಂಡಿದೆ.
ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ಸೇರಿ ಮೊದಲ ದಿನ ಸಿನಿಮಾ 74.50 ಕೋಟಿ ರೂ.ಗಳಿಸಿದೆ. ಇದೀಗ ಸೆಕೆಂಡ್ ಡೇ ಭಾರತದಲ್ಲಿ 53 ಕೋಟಿ ರೂಪಾಯಿಯ ಕಮಾಯಿಯನ್ನು ಮಾಡಿದೆ.
ಎರಡು ದಿನದಲ್ಲಿ ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ʼಜವಾನ್ʼ 127 ಕೋಟಿ ರೂ.ಗಳಿಸಿದೆ. ವರ್ಲ್ಡ್ ವೈಡ್ 200 ಕೋಟಿ ರೂಪಾಯಿಯ ಗಳಿಕೆಯನ್ನು ಕಂಡಿದೆ ಎಂದು ಸಿನಿಮಾ ಟ್ರೇಡ್ ಅನಾಲಿಸ್ಟ್ ರಮೇಶ್ ಬಾಲಾ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇದು ಆರಂಭಿಕ ಲೆಕ್ಕಚಾರವಾಗಿದ್ದು, ಅಧಿಕೃತ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.





