ಮಾದರಿಗ್ರೌಂಡ್ ಫ್ರೆಂಡ್ಸ್ ವಿಟ್ಲ ಇವರಿಂದ ಮಾದರಿ ಶಾಲೆಗೆ ಧನಸಹಾಯ
ವಿಟ್ಲ ಮಾದರಿ ಶಾಲೆಯ ಮೈದಾನದಲ್ಲಿ ಆಡುವ ಯುವಕರ ತಂಡವಾದ ” ಮಾದರಿ ಗ್ರೌಂಡ್ ಫ್ರೆಂಡ್ಸ್ ವಿಟ್ಲ ” ಇದರ ವತಿಯಿಂದ ವಿಟ್ಲ ಮಾದರಿ ಶಾಲೆಯ ಸಿಸಿ ಕ್ಯಾಮರಾ ಅಳವಡಿಕೆಗೆ ಧನಸಹಾಯವನ್ನು ನೀಡಲಾಯಿತು.
ಇದೇ ತಂಡ ಶಿಕ್ಷಕರ ದಿನದಂದು ಶಾಲೆಯ ಆಟದ ಮೈದಾನವನ್ನು ಸ್ವಚ್ಛಗೊಳಿಸಿ,ಯುವ ಶಕ್ತಿಯನ್ನು ಹೇಗೆ ಸಮಾಜಮುಖಿಯಾಗಿ ಬಳಸಬಹುದೆಂದು ತೋರಿಸಿ ಕೊಟ್ಟಿತ್ತು
ಮಾದರಿ ಗ್ರೌಂಡ್ ಫ್ರೆಂಡ್ಸ್ ನ ಅಧ್ಯಕ್ಷ ವಿ.ಕೆ.ಎಂ.ಹಂಝ, ಉಪಾಧ್ಯಕ್ಷ ಪ್ರವೀಣ್ ಕೈಂತಿಲ,ಸದಸ್ಯರಾದ ಇರ್ಶಾದ್ ಸೆಲೆಕ್ಟ್, ರಾಝಿಕ್ ಕೊಳಂಬೆ,ಬಶೀರ್ ಕುಂಡಡ್ಕ,ನೌಫಲ್ ಅಡ್ಡದಬೀದಿ,ಸದಾನಂದ ವಿಟ್ಲ, ವೇಣು ವಿಟ್ಲ ಮುಂತಾದವರಿದ್ದರು.






