February 2, 2026

ಉಳ್ಳಾಲ: ಸೋಮೇಶ್ವರ ಬೀಚ್ ಗೆ ತೆರಳಿದ್ದ ವೈದ್ಯ ಸಮುದ್ರಪಾಲು

0
image_editor_output_image250279340-1693809868802.jpg

ಉಳ್ಳಾಲ: ಸೋಮೇಶ್ವರ ಸಮುದ್ರ ಕಿನಾರೆಯ ರುದ್ರಪಾದೆಯಿಂದ ಕಾಲು ಜಾರಿ ಸಿಲುಕಿದ್ದ ಸಹ ವೈದ್ಯನ ರಕ್ಷಣೆಗೆ ತೆರಳಿದ್ದ ವೈದ್ಯರೊಬ್ಬರು ರುದ್ರ ಪಾದೆಯಿಂದ ಜಾರಿ ಸಮುದ್ರಪಾಲಾಗುತ್ತಿದ್ದು ರುದ್ರ ಪಾದೆಯಿಂದ ಮೊದಲು ಜಾರಿದ್ದ ವೈದ್ಯ ಕಲ್ಲು ಹಿಡಿದು ಪ್ರಾಣ ಉಳಿಸಿಕೊಂಡಿದ್ದು, ಸಮುದ್ರಪಾಲದ ಇನ್ನೊಬ್ಬ ವೈದ್ಯನ ಮೃತದೇಹ ಸೆ.4ರ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.

ಮೃತ ವೈದ್ಯ ನಗರದ ಎ.ಜೆ ಆಸ್ಪತ್ರೆಯಲ್ಲಿ ಸರ್ಜನ್, ಬೆಂಗಳೂರು ರಾಮನಗರ ನಿವಾಸಿ ಡಾl ಆಶೀಕ್ ಗೌಡ (30) ಸಮುದ್ರ ಪಾಲಾಗಿ ಮೃತಪಟ್ಟವರು.

ಭಾನುವಾರ ತಡರಾತ್ರಿ ನಗರದಿಂದ ಸೋಮೇಶ್ವರಕ್ಕೆ ಮೃತ ವೈದ್ಯ ಸೇರಿದಂತೆ ಇನ್ನೋರ್ವ ಸರ್ಜನ್ ಕುಂದಾಪುರ ಮೂಲದ ಡಾ.ಪ್ರದೀಶ್ ಮೂವರು ಇಂಟರ್ನ್ ಶಿಪ್ ನಡೆಸುತ್ತಿರುವ ವೈದ್ಯೆಯರ ಜೊತೆಗೆ ಸಮುದ್ರ ವಿಹಾರಕ್ಕೆಂದು ಭಾನುವಾರ ತಡರಾತ್ರಿ ಸೋಮೇಶ್ವರಕ್ಕೆ ಬಂದಿದ್ದರು.

Leave a Reply

Your email address will not be published. Required fields are marked *

error: Content is protected !!