April 12, 2025

ಕಾರ್ಕಳ: ಹಣ ಪಣಕಿಟ್ಟು ಜೂಜಾಟ: ನಾಲ್ವರು ಪೊಲೀಸರ ವಶಕ್ಕೆ

0



ಕಾರ್ಕಳ: ನಗರದ ಕಾವೇರಡ್ಕ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟದಲ್ಲಿ ನಿರತರಾಗಿದ್ದ ನಾಲ್ವರನ್ನು ಕಾರ್ಕಳ ನಗರ ಠಾಣಾ ಪಿಎಸ್ಐ ಸಂದೀಪ್ ಕುಮಾರ್ ಶೆಟ್ಟಿ ನೇತೃತ್ವ ದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ನಗರ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಸಂದೀಪ್‌ ಕುಮಾರ್‌ ಶೆಟ್ಟಿ ಹಾಗೂ ಸಿಬಂದಿ ಗಸ್ತು ಕರ್ತವ್ಯದಲ್ಲಿರುವಾಗ ದೊರೆತ ಮಾಹಿತಿ ಮೇರೆಗೆ ಕಸಬಾ ಗ್ರಾಮದ ಕಾವೆರಡ್ಕ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಒಟ್ಟು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಜುಗಾರಿ ಆಟವನ್ನು ಆಡುತ್ತಿದ್ದ ಸ್ಥಳಕ್ಕೆ ದಾಳಿಯನ್ನು ನಡೆಸಿದ್ದರು.

ಈ ವೇಳೆ ತೆಳ್ಳಾರು ನಿವಾಸಿ ವಿಜಯ್‌ ಕುಮಾರ್‌(38), ಪುಲ್ಕೇರಿ ನಿವಾಸಿ ಶಾಹಿದ್‌ ಪಿ.ಬಿ. (38), ಕುಂಬ್ರಪದವು ನಿವಾಸಿ ಸೋಮನಾಥ (30), ಕಸಬಾ ಗ್ರಾಮ ನಿವಾಸಿ ಸಂತೋಷ (38) ನನ್ನು ವಶಕ್ಕೆ ಪಡೆದಿದ್ದು ಅಪಾದಿತರಿಂದ ಜುಗಾರಿ ಆಟಕ್ಕೆ ಬಳಸಿದ 7,380 ರೂ. ನಗದು, ಹಾಗೂ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *

error: Content is protected !!