ಹೃದಯಘಾತದಿಂದ ಜೆಸಿಬಿ ಆಪರೇಟರ್ ಸಾವು
ದಾಂಡೇಲಿ: ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ದಾಂಡೇಲಿಯ ಗಾಂಧಿನಗರದಲ್ಲಿ ನಡೆದಿದೆ.
ಗಾಂಧಿನಗರ ಆಶ್ರಯ ಕಾಲೋನಿ ನಿವಾಸಿ ಅಸ್ಲಾಂ ಕಾಸೀಂ ಸಾಬ್ ಶೇಖ (23) ಮೃತ ಯುವಕನಾಗಿದ್ದಾನೆ.
ಕಾಸೀಂನು ಜೆ.ಸಿ.ಬಿ. ಆಪರೇಟರ್ ವೃತ್ತಿಯನ್ನು ಮಾಡುತ್ತಿದ್ದು, ಇಂದು ಬೆಳಿಗ್ಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿತ್ತು.
ಹಾಗಾಗಿ ಕೂಡಲೇ ಆತನನ್ನು ನಗರದದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರು.
ಆದರೆ ಅಷ್ಟರಲ್ಲಿ ಆವರು ಕೊನೆಯುಸಿರೆಳೆದಿದ್ದಾರೆ.