ಶಿವಮೊಗ್ಗ: ಹೆತ್ತ ಮಗನೇ ತಾಯಿಯನ್ನು ಕೊಲೆಗೈದ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.
ಸುಲೋಚನಮ್ಮ (60) ಕೊಲೆಯಾದ ತಾಯಿ. ಸಂತೋಷ್ (40) ಕೊಲೆಗೈದ ಆರೋಪಿಯಾಗಿದ್ದು, ತಾಯಿಯನ್ನು ಹತ್ಯೆ ಮಾಡಿದ ಬಳಿಕ ಜಮೀನಿನಲ್ಲಿ ಮಲಗಿದ್ದ. ಪಕ್ಕದ ಮನೆಯವರು ಸುಲೋಚನಮ್ಮಗೆ ಊಟ ಕೊಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.