750 ರೂ. ಸಾಲ ತೀರಿಸಲಾಗದೆ ಡೆತ್ ನೋಟ್ ಬರೆದಿಟ್ಟು 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು: 9ನೇ ತರಗತಿ ವಿದ್ಯಾರ್ಥಿಯೊಬ್ಬ 750 ರೂ. ಸಾಲ ತೀರಿಸಲಾಗದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.
ಶ್ರೀನಿವಾಸ್ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ.
ಈತ ಕೊಪ್ಪ ತಾಲೂಕಿನ ಖಾಸಗಿ ಶಾಲೆಯ ಆ. 22 ರಂದು ಆತ್ಮಹತ್ಯೆಗೆ ಶರಣಾಗಿದ್ದ.
ತನ್ನ ಸಾವಿಗೆ ಕಾರಣವನ್ನು ಬರೆದಿಟ್ಟಿರುವ ವಿದ್ಯಾರ್ಥಿ 750 ರೂ. ಬದಲು ಆಂಟಿ 3000 ರೂಪಾಯಿ ಕೇಳಿದ್ದಾರೆ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.