February 4, 2026

ಸುಳ್ಯ: ಅಡ್ಕಾರ್ ನಲ್ಲಿ ಕಾರುಗಳ ನಡುವೆ ಸರಣಿ ಅಪಘಾತ: ಪ್ರಯಾಣಿಕರು ಅಪಾಯದಿಂದ ಪಾರು
 

0
image_editor_output_image97982054-1693148750882.jpg


ಸುಳ್ಯ: ನಗರದಿಂದ ಪುತ್ತೂರು ಕಡೆಗೆ ಮೂರು ಕಾರುಗಳು ಒಟ್ಟೊಟ್ಟಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನ ಕಾರಿನ ಚಾಲಕ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿದ ಪರಿಣಾಮವಾಗಿ ಹಿಂಬದಿಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದ ಘಟನೆ ಅಡ್ಕಾರ್ ಸಮೀಪ ನಡೆದಿದೆ.

ಈ ಅಪಘಾತದಿಂದ ಎರಡೂ ಕಾರುಗಳು ಪಲ್ಟಿಯಾಗಿ ಜಖಂಗೊಂಡಿರುವುದಾಗಿ ತಿಳಿದುಬಂದಿದೆ. ಅಪಘಾತಕ್ಕೀಡಾದ ಕಾರಲ್ಲಿ ಒಂದು ಸಂಪಾಜೆ ಚರ್ಚ್ ನ ಫಾದರ್ ಜೋಸೆಫ್ ಅವರದ್ದಾಗಿದ್ದು, ಮತ್ತೆರಡು ಕಾರುಗಳು ಕಾಸರಗೋಡು ಮೂಲದ್ದು ಎಂದು ತಿಳಿದುಬಂದಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!