ಗ್ಯಾಸ್ ತುಂಬಿದ್ದ ಸಿಲಿಂಡರ್ ಸ್ಫೋಟ: ಹೋಟೆಲ್ ಶೆಟರ್ ಮುಂದೆ ಮಲಗಿದ್ದ ವ್ಯಕ್ತಿ ಸಾವು
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಓರ್ವ ವ್ಯಕ್ತಿ ಮೃತಪಟ್ಟು, ಇಬ್ಬರು ಗಂಭೀರ ಗಾಯ ಘಟನೆ ಬೆಂಗಳೂರಿನ ನಗರದ ಡೈರಿ ಸರ್ಕಲ್ ಬಳಿಯ ಮಹಾಲಿಂಗೇಶ್ ಬಡಾವಣೆಯ ಪೋಲಮಸ್ ಹೋಟೆಲ್ನಲ್ಲಿ ಬೆಳಿಗ್ಗೆ 9ಗಂಟೆ ನಡೆದಿದೆ.
ರವಿ(45) ಮೃತಪಟ್ಟ ವ್ಯಕ್ತಿ. ನಗರದ ಡೈರಿ ಸರ್ಕಲ್ ಬಳಿಯ ಮಹಾಲಿಂಗೇಶ್ ಬಡಾವಣೆಯ ಪೋಲಮಸ್ ಹೋಟೆಲ್ನಲ್ಲಿ ಬೆಳಿಗ್ಗೆ 9ಗಂಟೆಗೆ ಸಿಲಿಂಡರ್ ಸ್ಫೋಟಗೊಂಡು ಅವಘಡ ಸಂಭವಿಸಿದೆ.
ಸ್ಫೋಟದ ರಭಸಕ್ಕೆ ಹೋಟೆಲ್ ಶೆಟರ್ ಮುಂದೆ ಮಲಗಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.




