February 4, 2026

50 ರೂ.ಗೆ ಮೂರು ಗಾಂಜಾ ಚಾಕ್ಲೆಟ್: ಪೋಷಕರೇ ಮಕ್ಕಳ ಬಗ್ಗೆ ಎಚ್ಚರ

0
image_editor_output_image655358854-1692869760751.jpg

ಬೆಂಗಳೂರು: ಪ್ರಸ್ತುತ ಮಾದಕ ವಸ್ತುಗಳು ಚಾಕ್ಲೆಟ್ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಈ ಚಾಕ್ಲೆಟ್ ಅನ್ನು ಮಾರಾಟ ಮಾಡಲಾಗುತ್ತದೆ. ಇದೀಗ ಬೆಂಗಳೂರಿಗೂ ಗಾಂಜಾ ಚಾಕ್ಲೆಟ್ ಕಾಲಿಟ್ಟಿದ್ದು, ಉತ್ತರಪ್ರದೇಶದಿಂದ ಬೆಂಗಳೂರಿಗೆ ತಂದು ಮಾರಾಟ ಮಾಡುವ ಯತ್ನ ನಡೆದಿದೆ.

ಮನೋಕಾ ಹೆಸರಿನ ಗಾಂಜಾ ಚಾಕ್ಲೆಟ್ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಮೂವರು ಅಂಗಡಿ ಮಾಲೀಕರಿಗೆ ಮಾರಾಟ ಮಾಡಲು ಯತ್ನ ಮಾಡಿದ್ದಾರೆ.

ಈ ಕುರಿತು ಸಮೀಮ್ ಅಖ್ತಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, 6 ಲಕ್ಷ ರೂ. ಮೌಲ್ಯದ ಗಾಂಜಾ ಚಾಕ್ಲೆಟ್ ಅನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ಈ ಹಿಂದೆ ಕೂಡ ಗಾಂಜಾ ಚಾಕ್ಲೆಟ್ ಅನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಿದ್ದ. ಇದೀಗ ಆರ್‌ಎಂಸಿ ಯಾರ್ಡ್ ಬಳಿ ಈ ಚಾಕ್ಲೆಟ್ ಅನ್ನು ಮಾರಾಟ ಮಾಡಲು ಯತ್ನಿಸಿದ್ದು, 50 ರೂ.ಗೆ ಮೂರು ಚಾಕ್ಲೆಟ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!