ತಾವರೆ ಹೂ ಕೀಳಲು ಕೆರೆಗೆ ಇಳಿದಿದ್ದ ತಂದೆ, ಮಗ ನೀರಲ್ಲಿ ಮುಳುಗಿ ಸಾವು
ದೊಡ್ಡಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಮಾರಾಟಕ್ಕೆಂದು ತಾವರೆ ಹೂ ಕೀಳಲು ಕೆರೆಗೆ ಇಳಿದಿದ್ದ ತಂದೆ – ಮಗ ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ತಾಲೂಕಿನ ಭೂಚನಹಳ್ಳಿ ಕೆರೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಮೃತರ ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿ ಪುಟ್ಟರಾಜು (45), ಕೇಶವ (15) ಎಂದು ಗುರುತಿಸಲಾಗಿದೆ.
ತಾವರೆ ಹೂ ಕೀಳಲು ತಂದೆ ಮತ್ತು ಮಗ ಬಂದಿದ್ದರೆನ್ನಲಾಗಿದೆ. ಬಟ್ಟೆ, ಮೊಬೈಲ್ ಮತ್ತು ಚಪ್ಪಲಿ ದಡದಲ್ಲಿ ಇಟ್ಟು, ತಾವರೆ ಹೂ ಕೀಳುವ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.




