February 4, 2026

ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪೆಟ್ರೋಲ್‌ ಸುರಿದು ತಾಲೀಮು: ಸುಟ್ಟ ಗಾಯಗಳೊಂದಿಗೆ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು

0
image_editor_output_image-590293590-1692857933608.jpg

ರಾಮನಗರ: ಇಲ್ಲಿನ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನಡೆದ ತಾಲೀಮಿನಲ್ಲಿ ಎಡವಟ್ಟು ನಡೆದು ವಿದ್ಯಾರ್ಥಿಗೆ ಸುಟ್ಟ ಗಾಯಗಳಾದ ಘಟನೆ ರಾಮನಗರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಶಾಲೆಯಲ್ಲಿ ನಡೆದಿದೆ.

ಗಾಯಗೊಂಡ ವಿದ್ಯಾರ್ಥಿಯನ್ನು ಪ್ರೀತಮ್ (12) ಎನ್ನಲಾಗಿದೆ.

ಇಲ್ಲಿನ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆದಿದೆ ಈ ವೇಳೆ ವಿದ್ಯಾರ್ಥಿಗಳು ವೀರಗಾಸೆ ಪ್ರದರ್ಶನ ನಡೆಸಿದ್ದಾರೆ, ಈ ಪ್ರದರ್ಶನದ ವೇಳೆ ವಿದ್ಯಾರ್ಥಿಗಳ ಕೈಯಲ್ಲಿ ಪೆಟ್ರೋಲ್ ನೀಡಲಾಗಿತ್ತು ತಾಲೀಮು ನಡೆಸುವ ವೇಳೆ ಪೆಟ್ರೋಲ್ ವಿದ್ಯಾರ್ಥಿಯ ಮೈಮೇಲೆ ಬಿದ್ದು ಕಣ್ಣು, ಮುಖ ಹಾಗೂ ತಲೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ, ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!