ಚೆಸ್ ವಿಶ್ವಕಪ್ ಫೈನಲ್: 2ನೇ ಗೇಮ್ ಡ್ರಾ, ನಾಳೆ ಟೈಬ್ರೇಕರ್ ಪಂದ್ಯ
ಬಾಕು: ಅಝರ್ಬೈಜಾನ್ನಲ್ಲಿ ನಡೆದ ಚೆಸ್ ವಿಶ್ವಕಪ್ ಫೈನಲ್ನ 2ನೇ ಗೇಮ್ ಕೂಡ ಡ್ರಾನಲ್ಲಿ ಅಂತ್ಯಗೊಂಡಿದೆ. ಆರ್. ಪ್ರಜ್ಞಾನಂದ ಹಾಗೂ ಮ್ಯಾಗ್ನಸ್ ಕಾರ್ಲ್ಸೆನ್ ನಡುವಣ ಈ ಪಂದ್ಯದ ಮೊದಲ ಗೇಮ್ ಕೂಡ ಡ್ರಾ ಆಗಿತ್ತು.
ಇದೀಗ ಫೈನಲ್ ಪಂದ್ಯದ 2ನೇ ಕ್ಲಾಸಿಕ್ ಗೇಮ್ ಕೂಡ ಸಮಬಲದೊಂದಿಗೆ ಅಂತ್ಯವಾಗಿದೆ. ಹೀಗಾಗಿ ಬುಧವಾರ ನಡೆಯಲಿರುವ ಟೈಬ್ರೇಕರ್ ಪಂದ್ಯದ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
ಬುಧವಾರ ನಡೆದ 2ನೇ ಗೇಮ್ನಲ್ಲಿ ಕಪ್ಪು ಕಾಯಿಗಳೊಂದಿಗೆ ಚದುರಂಗ ಚಲನೆ ಆರಂಭಿಸಿದ್ದ ಪ್ರಜ್ಞಾನಂದ ಆರಂಭದಲ್ಲೇ ಸಮಬಲದ ಹೋರಾಟ ನಡೆಸಿದ್ದರು. ಕಾರ್ಲ್ಸೆನ್ ಜಾಣ ಚಲನೆಗೆ ಅತ್ಯುತ್ತಮ ಚೆಕ್ ನಡೆಗಳ ಮೂಲಕ ಪ್ರಜ್ಞಾನಂದ ಕೌಂಟರ್ ನೀಡಿದ್ದರು. ಪರಿಣಾಮ 22 ನಡೆಗಳ ನಂತರ ಕೂಡ ಪಂದ್ಯವು ಸಮತೋಲಿತವಾಗಿತ್ತು.
ಈ ಸಮಬಲವನ್ನು ಕಾಯ್ದುಕೊಳ್ಳುವಲ್ಲಿ ಇಬ್ಬರು ಆಟಗಾರರು ಯಶಸ್ವಿಯಾದರು. ಅಲ್ಲದೆ 30 ನಡೆಗಳ ನಂತರ ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಿದರು. ಇದರೊಂದಿಗೆ 2 ಕ್ಲಾಸಿಕ್ ಗೇಮ್ಗಳು 1-1 ಅಂತರದಿಂದ ಸಮಬಲವಾಗಿದೆ.