May 13, 2026

ಜ್ವರ ಕಡಿಮೆಯಾಗಲೆಂದು ವೈದ್ಯರು ನೀಡಿದ ಇಂಜೆಕ್ಷನ್ ಅಡ್ಡ ಪರಿಣಾಮ: ಕುಂದಾಪುರದ ಯುವಕ ಮೃತ್ಯು

0
image_editor_output_image-2022803197-1692678404979.jpg

ಕುಂದಾಪುರ: ಜ್ವರ ಕಡಿಮೆಯಾಗಲೆಂದು ವೈದ್ಯರು ನೀಡಿದ ಇಂಜೆಕ್ಷನ್ ಅಡ್ಡ ಪರಿಣಾಮದಿಂದ ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರು ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ.

ಕುಂದಾಪುರದ ಹೊಸಂಗಡಿ ಬೆದ್ರಳ್ಳಿ ನಿವಾಸಿ ದಿ. ಚಂದ್ರ ಶೆಟ್ಟಿ ಎಂಬುವವರ ಪುತ್ರ ಅಮರ್ ಶೆಟ್ಟಿ [31] ಮೃತ ದುರ್ದೈವಿ. ದುಬೈನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಅಮರ್ ಶೆಟ್ಟಿ ಒಂದು ವರ್ಷದ ಹಿಂದಷ್ಟೇ ಊರಿಗೆ ಹಿಂದಿರುಗಿ ಬೆಂಗಳೂರಿನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು.

ಆ.13ರಂದು ಕೆ.ಪಿ. ಅಗ್ರಹಾರದ ಸಂಬಂಧಿಯ ಮನೆಗೆ ತೆರಳಿದ್ದಾಗ ಮೈ ಬಿಸಿ ಇರುವುದನ್ನು ಗಮನಿಸಿ ಅಲ್ಲಿಯೇ ಸಮೀಪವಿದ್ದ ಖಾಸಗಿ ಕ್ಲಿನಿಕ್‌ಗೆ ತೆರಳಿದ್ದು ವೈದ್ಯರು ಪರೀಕ್ಷಿಸಿ ಜ್ವರವೆಂದು ಇಂಜೆಕ್ಷನ್ ಹಾಗೂ ಮಾತ್ರೆಗಳನ್ನು ನೀಡಿದ್ದರು. ಆದರೆ ಇಂಜೆಕ್ಷನ್ ನೀಡಿದ ಭಾಗ ಇದ್ದಕ್ಕಿದ್ದಂತೆ ಊದಿಕೊಂಡು, ನೋವು ಕಾಣಿಸಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!