ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ: ಬ್ಯಾಂಕ್ ಉದ್ಯೋಗಿ ಸಾವು
ಕೊಡಗು: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬ್ಯಾಂಕ್ ಉದ್ಯೋಗಿ ಒಬ್ಬರು ಸಾವಿಗೀಡಾಗಿರುವ ಘಟನೆ ಕೊಡಗು ಜಿಲ್ಲೆಯ ಅಮ್ಮತ್ತಿಯಲ್ಲಿ ತಡರಾತ್ರಿ ನಡೆದಿದೆ.
ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಗ್ರಾಮ ಅಪಘಾತ ಸಂಭವಿಸಿದ್ದು, ಅಮೃತ (24) ಹೆಸರಿನ ಬ್ಯಾಂಕ್ ಉದ್ಯೋಗಿ ಮೃತಪಟ್ಟಿದ್ದಾರೆ. ಮೂಲತಃ ಕೇರಳದ ತ್ರಿಶೂರ್ ಮೂಲದ ಅಮೃತ, ಅಮ್ಮತಿ ಕೆನರಾ ಬ್ಯಾಂಕ್ ಉದ್ಯೋಗಿ ಆಗಿದ್ದರು.





