ಎದೆಹಾಲು ಕುಡಿದು ಮಲಗಿದ್ದ 3 ತಿಂಗಳ ಮಗು ಮೃತ್ಯು
ತಿರುವನಂತಪುರಂ: ಅಮ್ಮನ ಎದೆಹಾಲು ಕುಡಿದು ಮಲಗಿದ್ದ ಮೂರು ತಿಂಗಳ ಪುಟ್ಟ ಕಂದಮ್ಮ ಮೃತಪಟ್ಟ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಜಯಕೃಷ್ಣನ್ ಹಾಗೂ ಜನಿಮೋಲ್ ದಂಪತಿಯ ಮಗ ಜಿತೇಶ್ ಮೃತ ದುರ್ದೈವಿ ಕಂದಮ್ಮ. ಮಗುವಿಗೆ ಹಾಲುಣಿಸಿ ನಿದ್ದೆ ಮಾಡುತ್ತಿದ್ದಂತೆಯೇ ಇತ್ತ ಜನಿಮೋಲ್ ಕೂಡ ನಿದ್ದೆಗೆ ಜಾರಿದ್ದಾರೆ.
ಆದರೆ ಮರುದಿನ ಮಗು ಮುಂಜಾನೆ ಎದ್ದೇಳದನ್ನು ಅರಿತ ದಂಪತಿ ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.





