13 ದಿನದ ಮಗುವನ್ನು ತುರ್ತು ಚಿಕಿತ್ಸೆ: ಉಡುಪಿಯಿಂದ ಬೆಂಗಳೂರುವರೆಗೆ “Zero Traffic”
ಮಂಗಳೂರು: ಉಡುಪಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾದ 13 ದಿನದ ಮಗುವನ್ನು ತುರ್ತು ಚಿಕಿತ್ಸೆಗೆ ಬೆಂಗಳೂರು ಕೆಎಂಸಿಸಿ ಆಂಬ್ಯುಲೆನ್ಸ್ ಮೂಲಕ ಝೀರೊ ಟ್ರಾಫಿಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದು ಎಲ್ಲಾ ವಾಹನ ಸವಾರರು ಮತ್ತು ಸಾರ್ವಜನಿಕರು ಆಂಬ್ಯುಲೆನ್ಸ್ ಗೆ ದಾರಿ ಮಾಡಿ ಕೊಡಬೇಕಾಗಿ ಅಖಿಲ ಕರ್ನಾಟಕ ಆಂಬ್ಯುಲೆನ್ಸ್ ರೋಡ್ ಸೇಫ್ಟಿ ವಿಂಗ್ ಮನವಿ ಮಾಡಿರುತ್ತದೆ.
ಆಂಬ್ಯುಲೆನ್ಸ್ ಚಲಿಸುವ ಮಾರ್ಗ ಮಣಿಪಾಲ ಕಾರ್ಕಳ ಗುರುವಾಯನಕೆರೆ ಬೆಳ್ತಂಗಡಿ ಉಜಿರೆ ಚಾರ್ಮಾಡಿ ಮೂಡಿಗೆರೆ ಹಾಸನ ಕುಣಿಗಲ್ ಜಯದೇವ ಆಸ್ಪತ್ರೆ ಎಂದು ವಿಂಗ್ ತಿಳಿಸಿದೆ.





