ಬೆಳ್ತಂಗಡಿ: ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕರಿಬ್ಬರು ಸಾವು
ಬೆಳ್ತಂಗಡಿ: ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕರಿಬ್ಬರು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಕಲ್ಮಂಜ ಗಾಮ್ರದ ಮೂಲಾರು ಅಂಬಟೆ ಮನೆ ನಿವಾಸಿ ಶಶಿಧರನ್ ನಾಯರ್ (68) ಹಾಗೂ ಬೆಳಾಲು ಗ್ರಾಮದ ಸುರುಳಿ ಮೂಲದ ಅಂಗಾರ (58) ಮೃತ ಕೃಷಿಕರು.
ಶಶಿಧರನ್ ಅವರು ಶನಿವಾರದಂದು ಮನೆ ಸಮೀಪದ ಸೀಯಾಳ ಕೀಳಲು ಎಂದು ಅಲ್ಯುಮಿನಿಯಂ ದೋಟಿ ಹಿಡಿದು ಸಾಗುತ್ತಿದ್ದಾಗ ವಿದ್ಯುತ್ ತಂತಿಗೆ ದೋಟಿ ತಗುಲಿ ವಿದ್ಯುತ್ ಸ್ಪರ್ಶಿಸಿದೆ.
ಈ ವೇಳೆ ಅವರು ಜೋರಾಗಿ ಬೊಬ್ಬೆ ಹಾಕಿದ್ದರು. ಈ ಶಬ್ಧ ಕೇಳಿದ ಪತ್ನಿ ಹಾಗೂ ಮನೆ ಸಮೀಪದ ಮಹಿಳೆ ಸ್ಥಳಕ್ಕೆ ಬಂದು ನೋಡಿದಾಗ ಶಶಿಧರನ್ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಪ್ರಾಥಮಿಕ ಆರೈಕೆ ಮಾಡಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು.
ಆದರೆ ವೈದ್ಯರು ಪರೀಕ್ಷಿಸಿದಾಗ ಶಶಿಧರನ್ ಅವರು ಮೃತಪಟ್ಟಿದ್ದಾರೆ ಎಂದು ಧೃಡಪಟ್ಟಿದೆ. ಧರ್ಮಸ್ಥಳ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಮೃತ ಶಶಿಧರನ್ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.





