December 19, 2025

ಉಕ್ಕುಡಮಸೀದಿಯಲ್ಲಿ “ಮೇರಾ ವತನ್”, ಯೋಧರಿಗೆ ಸನ್ಮಾನ

0
IMG-20230815-WA0011

ಹಿರಿಯರು ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟದ್ದು ಇತಿಹಾಸ. ಪ್ರಸ್ತುತ ಅದನ್ನು ಉಳಿಸಿ ಸಮೃದ್ಧ, ಸೌಹಾರ್ದ ಭಾರತ ಕಟ್ಟಬೇಕಾದ ಅನಿವಾರ್ಯತೆ ಇದೆ ಎಂದು ಬಂಟ್ವಾಳದ ಪ್ರಸಿದ್ಧ ಹಿರಿಯ ನ್ಯಾಯಾವಾದಿ ಜಯರಾಮ ರೈ ವಿಟ್ಲ ಹೇಳಿದರು.

ಉಕ್ಕುಡ ಬದ್ರಿಯಾ ಜುಮಾ ಮಸೀದಿಯಲ್ಲಿ ಮಸೀದಿ ಆಡಳಿತ ಮಂಡಳಿ ಹಾಗೂ ಮುಹ್ಯಿಸ್ಸುನ್ನ ವಿದ್ಯಾರ್ಥಿ ಸಂಘಟನೆಯ ಸಹಯೋಗದಲ್ಲಿ ನಡೆದ “ಮೇರಾ ವತನ್” ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಉಕ್ಕುಡದ ಹಿರಿಯರಾದ ಯು.ಪಿ. ಜಯರಾಮ್ ಮುಖ್ಯ ಅತಿಥಿಯಾಗಿದ್ದರು. ಉಕ್ಕುಡ ಮಸೀದಿ ಮುದರ್ರಿಸ್ ಹಾಫಿಝ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಮಳಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಯೋಧ, ಉಕ್ಕುಡ ಜಮಾಅತ್ ಸದಸ್ಯ ವಿ.ಎಂ. ನಿಸಾರ್ ವಿಟ್ಲ ಅವರನ್ನು ಸನ್ಮಾನಿಸಲಾಯಿತು. ಮುಹ್ಯಿಸ್ಸುನ್ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಉಕ್ಕುಡ ಮುದರ್ರಿಸ್ ಅವರನ್ನು ಅಭಿನಂದಿಸಲಾಯಿತು. ಮಲಪುರಂ ಹಿಕಮಿಯಾ ವತಿಯಿಂದ ನಡೆದ ಸ್ವಾತಂತ್ರ್ಯ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಯೂನುಸ್ ಕೂರತ್ ಅವರಿಗೆ ಸ್ಮರಣಿಕೆ ನೀಡಲಾಯಿತು. ಉಕ್ಕುಡ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಕಲ್ಲಂಗಳ, ಬಂಟ್ವಾಳ ಜಮೀಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಮದ್ರಸ ಮುಖ್ಯ ಶಿಕ್ಷಕ ಅಬ್ದುಲ್ ಹಮೀದ್ ಮದನಿ, ಶಿಕ್ಷಕ ಕಾನತ್ತಡ್ಕ ಹಮೀದ್ ಮದನಿ, ಮಸೀದಿ ಕಾರ್ಯದರ್ಶಿ ಶರೀಫ್ ತೈಬಾ, ಮುನೀರ್ ದರ್ಬೆ, ಅಬೂಬಕರ್ ಮೆಹರಾಜ್, ಮೂಸಾ ಬುಡಾಲ್ತಡ್ಕ, ಟೆಲಿಫೋನ್ ಅಬೂಬಕರ್, ಕೆಎಸ್ ಹಮೀದ್, ಹನೀಫ್ ಕುದ್ದುಪದವು, ಹೈದರ್ ಆಲಂಗಾರು, ಶರೀಫ್ ಉಕ್ಕುಡ ಮೊದಲಾದವರು ಉಪಸ್ಥಿತರಿದ್ದರು. ಮುಹ್ಯಿಸ್ಸುನ್ನ ವಿದ್ಯಾರ್ಥಿಗಳಾದ ಸಿನಾನ್ ತೆಕ್ಕಾರ್, ಆಶಿಕ್ ಬೋಳಿಯಾರ್, ಉಬೈದುಲ್ಲಾ ಸೆರ್ಕಳ, ಮುಆಝ್ ಲಾಡಿ, ಯೂನುಸ್ ಕೂರತ್ ವಿವಿಧ ಭಾಷೆಗಳಲ್ಲಿ “ಮೇರಾ ವತನ್” ಭಾಷಣ ಮಾಡಿದರು. ಡಿ.ಎಂ.ರಶೀದ್ ಉಕ್ಕುಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!