ಬಂಟ್ವಾಳ: ಬಾವಿಗೆ ಹಾರಿ ಯುವ ಕಲಾವಿದ ಆತ್ಮಹತ್ಯೆ
ಬಂಟ್ವಾಳ: ಒಂದಡೆ ಅನಾರೋಗ್ಯ, ಇನ್ನೊಂದೆಡೆ ಉದ್ಯೋಗ ಇಲ್ಲ ಜೀವನವೇ ದುಸ್ತರ , ಬದುಕಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದ ಕಲಾವಿದ ಯುವಕನೋರ್ವ ಬಾವಿಗೆ ಹಾರಿ ಜೀವ ಕಳೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತಮಜಲು ಎಂಬಲ್ಲಿ ನಡೆದಿದೆ.
ಮಿತ್ತಮಜಲು ನಿವಾಸಿ ಚಿತ್ರಕಾರ ಸಾಗರ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ ಯುವಕ. ಬೆಳಿಗ್ಗೆ ಸುಮಾರು 8.30 ರ ವೇಳೆ ಮನೆಯಂಗಳದಲ್ಲಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಸುನಿಲ್ ಕುಮಾರ್ ಅವರ ಮಾರ್ಗದರ್ಶನ ದಲ್ಲಿ, ಸಿಬ್ಬಂದಿಗಳಾದ ರೋಹಿತ್, ಕಿರಣ್ ಕುಮಾರ್, ರಾಜೇಶ್, ಸುರೇಂದ್ರ ಹಾಗೂ ನಾಗರಾಜ್ ಅವರ ನೆರವಿನಿಂದ ಬಾವಿಯಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು.





