July 10, 2026

ಬೆಳ್ತಂಗಡಿ: ಅನಾರೋಗ್ಯದಿಂದ ನರ್ಸಿಂಗ್ ವಿದ್ಯಾರ್ಥಿನಿ ಮೃತ್ಯು

0
image_editor_output_image-20327314-1691985467947

ಬೆಳ್ತಂಗಡಿ: ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತಗಾಗಿ ಮೃತಪಟ್ಟ ಘಟನೆ ಆ 13 ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಜಾತಿಮಾರು ನಿವಾಸಿ ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ (19) ಮೃತಪಟ್ಟ ಯುವತಿಯಾಗಿದ್ದಾಳೆ.

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದ ವಿದ್ಯಾರ್ಥಿನಿ ಸುಮ ಮನೆಗೆ ಬಂದಿದ್ದಳು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಮಾತ್ರೆಗಳನ್ನು ಪಡೆದು ಮನೆಗೆ ತೆರಳಿದ್ದಳು. ನಂತರ ಆಗಸ್ಟ್11 ರಂದು ಮತ್ತೆ ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು ಗುಣಮುಖವಾಗಿರುವ ಕಾರಣ ತನ್ನ ಅಕ್ಕನ ಮನೆ ಬಳ್ಳಮಂಜಕ್ಕೆ ತೆರಳಿದ್ದು. ಆಗಸ್ಟ್ 13 ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಲೋ ಬಿಪಿ ಉಂಟಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!