July 10, 2026

ಪ್ರೇಮಿ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ

0
image_editor_output_image-472045110-1691990484616.jpg

ಚಿಕ್ಕಮಗಳೂರು: ಪ್ರೇಮಿ ಜೊತೆಯಿರಲು ಅಡ್ಡಗಾಲಾಗುತ್ತಿದ್ದ ಪತಿಯನ್ನು ಪ್ರೇಮಿ ಜೊತೆ ಸೇರಿ ಪತ್ನಿಯೇ ಕೊಲೆ ಮಾಡಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.

ನವೀನ್ (28) ಪತ್ನಿ ಕಣ್ಣಾಮುಚ್ಚಾಲೆ ಆಟಕ್ಕೆ ಬಲಿಯಾದ ಪತಿ. ಪತ್ನಿ ಪಾವನ ಹಾಗೂ ಆಕೆಯ ಪ್ರೇಮಿ ಸಂಜಯ್‌ ಕೊಲೆ ಮಾಡಿದ ಆರೋಪಿಗಳು ಎಂದು ತಿಳಿದು ಬಂದಿದೆ.

ನವೀನ್‌ ಅವರ ಮೃತದೇಹ ಆಗಸ್ಟ್ 6 ರಂದು ಯಗಟಿ ಕೆರೆ ಬಳಿ ಪತ್ತೆಯಾಗಿತ್ತು. ಇದು ಸಹಜ ಸಾವಲ್ಲ, ಕೊಲೆ ಎಂದು ನವೀನ್ ಪೋಷಕರು ಯಗಟಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ನವೀನ್‌ ಪೋಷಕರು ನೀಡಿದ ದೂರಿನ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರಿಗೆ ಪತ್ನಿಯೇ ಪತಿಯನ್ನು ಕೊಂದಿರುವುದಾಗಿ ತನಿಖೆಯಲ್ಲಿ ಪಾವನ ಹಾಗೂ ಸಂಜಯ್ ಬಾಯ್ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!