ವಿಟ್ಲ: ಅಗಸ್ಟ್ 15 ರಂದು ಜನಪ್ರಿಯ ಸೆಂಟ್ರಲ್ ಸ್ಕೂಲ್ ಮತ್ತು ಕಂಬಳಬೆಟ್ಟು ಜಮಾತ್ ಕಮಿಟಿ ವತಿಯಿಂದ ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಜಾಗೃತಿ ಜಾಥ
ವಿಟ್ಲ: ಅಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕಂಬಳಬೆಟ್ಟು ಮೊಹಿಯುದ್ದೀನ್ & ಇಬ್ರಾಹಿಂ ಜಮಾತ್ ಕಮಿಟಿ (ರಿ) ಮತ್ತು ಜನಪ್ರಿಯ ಫೌಂಡೇಶನ್ (ರಿ) ಇದರ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಜನಪ್ರಿಯ ಸೆಂಟ್ರಲ್ ಸ್ಕೂಲ್ ಮತ್ತು ಇದರ ಜಂಟಿ ಆಶ್ರಯದಲ್ಲಿ ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಜಾಗೃತಿ ಜಾಥ ಎಂಬ ಕಾರ್ಯಕ್ರಮ ಕಂಬಳಬೆಟ್ಟುವಿನಲ್ಲಿ ನಡೆಯಲಿದೆ. ಈ ಜಾಗೃತಿ ಜಾಥಾವು ಬೆಳಿಗ್ಗೆ 9:30 ಘಂಟೆಗೆ ಕಂಬಳಬೆಟ್ಟು ಶಾಂತಿನಗರ ಜಂಕ್ಷನ್ನಿಂದ ಹೊರತು ಕಂಬಳಬೆಟ್ಟು ಸಾದತ್ ನಗರದ ವರೆಗೆ ಬಂದು ಜನ ಜಾಗೃತಿ ಸಭೆಯೊಂದಿಗೆ ಸಮಾಪ್ತಿಗೊಳ್ಳಲಿದೆ ಎಂದು ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



