December 19, 2025

ಸುಳ್ಯ: ಮುಸ್ಲಿಂ ಯುವಕನಿಗೆ ಹಲ್ಲೆ:
ಯುವಕ ಆಸ್ಪತ್ರೆಗೆ ದಾಖಲು

0
Teen-gangs.jpg

ಸುಳ್ಯ: ಹಿಂದೂ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಕ್ಕೆ ಯುವಕನಿಗೆ ಹಿಡಿದು ಥಳಿಸಿರುವ ಘಟನೆ ಸುಳ್ಯ ತಾಲೂಕಿನ ಅರಂತೋಡಿನಿಂದ ವರದಿಯಾಗಿದೆ. ಪೆಟ್ಟು ತಿಂದವ ಬಿಳಿಯಾರಿನ ಹುಡುಗ ಎಂದು ತಿಳಿದು ಬಂದಿದೆ.

ಅರಂತೋಡಿನಲ್ಲಿ ಹಿಂದೂ ಯುವತಿಯ ಜೊತೆ ಯುವಕ ವಾಹನದಲ್ಲಿ ಹೋಗುವಾಗ ಸಿಕ್ಕಿಬಿದ್ದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಾಹನವನ್ನು ಅಡ್ಡಗಟ್ಟಿ ಸ್ಥಳೀಯರು ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಮುಸ್ಲಿಂ ಯುವಕ ಎಂದು ತಿಳಿದು ಬಂದಿದೆ. ರೊಚ್ಚಿಗೆದ್ದ ಜನ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಈ ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!