ಅಂಗನವಾಡಿ ಕೇಂದ್ರದ ಛಾವಣಿ ಕುಸಿತ: ಮಗುವಿನ ತಲೆಗೆ ಗಾಯ
ಯಾದಗಿರಿ: ಅಂಗನವಾಡಿ ಕೇಂದ್ರದ ಛಾವಣಿ ಕುಸಿದು, 10 ತಿಂಗಳ ಮಗುವಿನ ತಲೆಗೆ ಗಾಯ ಆಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ಗ್ರಾಮದಲ್ಲಿ ನಡೆದಿದೆ.
ಮರಕಲ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಹಾಕ್ತಿದ್ದಾಗಲೇ ಮೇಲ್ಛಾವಣಿಯ ಪ್ಲಾಸ್ಟರ್ ಕುಸಿದು ಬಿದ್ದಿದೆ. ಮೇಲ್ಛಾವಣಿಯ ಪದರು ತಲೆ ಮೇಲೇ ಬಿದ್ದ ಪರಿಣಾಮ 10 ತಿಂಗಳ ಮಗು ಕೀರ್ತಿ ತಲೆಗೆ ಗಾಯ ಆಗಿದೆ. ಇದೇ ವೇಳೆ ಅಂಗನವಾಡಿ ಕೇಂದ್ರದಲ್ಲಿದ್ದ ಇತರ 6 ಮಕ್ಕಳು ಹಾಗೂ ಪೋಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.





