ಕಣಚೂರು: ಹಾಡಹಗಲೇ ಮನೆಯ ಹೆಂಚು ತೆಗೆದು ಕಳ್ಳತನ
ಚಿಕ್ಕಮಗಳೂರು: ಹಾಡಹಗಲೇ ಮನೆಯೊಂದರ ಹೆಂಚು ತೆಗೆದು ಕಳ್ಳತನ ಎಸಗಿದ ಪ್ರಕರಣ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕಣಚೂರಿನಲ್ಲಿ ನಡೆದಿದೆ.
ಗ್ರಾಮದ ವೇದಾವತಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. 120 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಹಾಗೂ 25 ಸಾವಿರ ರೂ. ಹಣವನ್ನ ಕಳ್ಳರು ದೋಚಿದ್ದಾರೆ. ವೇದಾವತಿಯವರು ಬೆಳಗ್ಗೆ ತಮ್ಮ ಕಾಫಿ ತೋಟಕ್ಕೆ ಹೋಗಿದ್ದರು. ಈ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಮಧ್ಯಾಹ್ನ ಊಟಕ್ಕೆ ಬಂದಾಗ ಕಳ್ಳತನ ಎಸಗಿರುವುದು ಬೆಳಕಿಗೆ ಬಂದಿದೆ.





