December 19, 2025

ನರ್ಸ್‌ಗಳ ಬಗ್ಗೆ ಅವಹೇಳನಕಾರಿ ರೀಲ್ಸ್: ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ 11 ವಿದ್ಯಾರ್ಥಿಗಳ ಅಮಾನತು

0
image_editor_output_image1801342661-1691563236803.jpg

ಹುಬ್ಬಳ್ಳಿ: ನರ್ಸ್‌ಗಳ ಮೇಲೆ ಅವಹೇಳನಕಾರಿಯಾಗಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಕ್ಕಾಗಿ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯೊಂದರ 11 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ.

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್) ಆವರಣದಲ್ಲಿ ಈ ಘಟನೆ ನಡೆದಿದೆ. ಈ ಹಿನ್ನಲೆಯಲ್ಲಿ ಆರೋಪಿ ವಿದ್ಯಾರ್ಥಿಗಳನ್ನು ಒಂದು ವಾರ ಅಮಾನತುಗೊಳಿಸಿ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಆದೇಶ ಹೊರಡಿಸಿದ್ದಾರೆ.

ನರ್ಸ್‌ಗಳನ್ನು ಕೆಟ್ಟದಾಗಿ ಮತ್ತು ಅವಮಾನಕರ ರೀತಿಯಲ್ಲಿ ಚಿತ್ರಿಸುವ ರೀಲ್‌ಗಳನ್ನು ಅವರ ಅನುಮತಿಯಿಲ್ಲದೆ ಮಾಡಲಾಗಿದೆ. ಜನಪ್ರಿಯ ಕನ್ನಡ ಚಲನಚಿತ್ರ ಹಾಡಿನ ಸಂಗೀತವನ್ನು ಸೇರಿಸಿ ಈ ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಹುಡುಗಿಯರನ್ನು ನಂಬಬಾರದು, ನರ್ಸ್‌ಗಳನ್ನು ನಂಬಬಾರದು ಎಂಬ ಸಾಲುಗಳಿದ್ದು ಈ ಹಾಡಿಗೆ ಹುಡುಗರೂ ನೃತ್ಯ ಸಹ ಮಾಡಿದರು

Leave a Reply

Your email address will not be published. Required fields are marked *

You may have missed

error: Content is protected !!