ಡಿಪೋದಲ್ಲಿ ಮ್ಯಾನೇಜರ್ ಕಚೇರಿ ಎದುರೇ ಬಸ್ ಚಾಲಕ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಬಿಎಂಟಿಸಿ ಬಸ್ ಡಿಪೋದಲ್ಲಿ ಮ್ಯಾನೇಜರ್ ಕಚೇರಿ ಎದುರೇ ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ
ಆವತಿ ಗ್ರಾಮದ ನಾಗೇಶ್ (45) ಆತ್ಮಹತ್ಯೆಗೆ ಶರಣಾದ ನೌಕರ. ಕಳೆದ ರಾತ್ರಿ ಡಿಪೋಗೆ ಆಗಮಿಸಿದ ನಾಗೇಶ್ ಮ್ಯಾನೇಜರ್ ಕಚೇರಿ ಎದುರೇ ನೇಣಿಗೆ ಶರಣಾಗಿದ್ದಾರೆ. ಬೆಳಗ್ಗೆ ಸಿಬ್ಬಂದಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.





