December 19, 2025

ಉಳ್ಳಾಲ: ನಿಷೇಧಿತ ಎಂಡಿಎಂಎ ಮಾರಾಟ: ರಿಕ್ಷಾ ಚಾಲಕನ ಬಂಧನ

0
IMG-20230807-WA0020.jpg

ಉಳ್ಳಾಲ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲದ ಭಗಂಬಿಲ ಸ್ಮಶಾನದ ಮೈದಾನದಲ್ಲಿ ಸಾರ್ವಜನಿಕವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಶಾಂತಿಬಾಗ್ ನಿವಾಸಿ ಮಹಮ್ಮದ್ ಶರೀಫ್ ಯಾನೆ ಫೈಝಲ್ ನನ್ನು ಬಂಧಿಸಿದ್ದಾರೆ.

ಬಂಧಿತನಿಂದ 12 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ಎರಡು ಮೊಬೈಲ್ ಫೋನ್ ಸಮೇತ ಮಾದಕ ವಸ್ತುವನ್ನು ಮಾರಾಟ ಮಾಡಲು ಉಪಯೋಗಿಸಿದ ಆಟೋರಿಕ್ಷವನ್ನು ವಶಕ್ಕೆ ಪಡೆದು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ.

95,000 ಮೌಲ್ಯದ ಒಟ್ಟು ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಉಳ್ಳಾಲ ಪೊಲೀಸ್ ನಿರೀಕ್ಷಕ ಸಂದೀಪ್ ರವರ ಮಾರ್ಗದರ್ಶನದಲ್ಲಿ ಉಳ್ಳಾಲ ಪೊಲೀಸ್ ಠಾಣ ಉಪನಿರೀಕ್ಷಕ ಸಂತೋಷ್ ಕುಮಾರ್ ಹಾಗೂ ಸಿಬ್ಬಂದಿಗಳಾದ ರಂಜಿತ್,ಅಶೋಕ್, ಮಂಜುನಾಥ್ ರವರುಗಳು ದಾಳಿ ಮಾಡಿ ಪ್ರಕರಣ ಬೇಧಿಸಿದ್ದಾರೆ.ಆರೋಪಿ ಹಲವು ವರ್ಷಗಳಿಂದ ತನ್ನ ರಿಕ್ಷಾವನ್ನು ಕೂಡ ಅಪರಿಮಿತ ವೇಗದಿಂದ ಚಲಾಯಿಸುತ್ತಿದ್ದು, ಹಲವು ರೀತಿಯ ಅಪಘಾತಗಳು ಸ್ವಲ್ಪ ಅಂತರದಲ್ಲಿ ತಪ್ಪಿದೆ.

Leave a Reply

Your email address will not be published. Required fields are marked *

You may have missed

error: Content is protected !!