ನ್ಯಾಯಾಲಯಕ್ಕೆ ಕರೆದೊಯ್ಯುವಾಗ ವಿಚಾರಧೀನ ಕೈದಿ ಪರಾರಿ
ಚಾಮರಾಜನಗರ: ಕೋರ್ಟ್‍ಗೆ ಕರೆದೊಯ್ಯುವಾಗ ವಿಚಾರಣಾಧೀನ ಕೈದಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ತಮಿಳುನಾಡಿನ ಹಾಸನೂರು ಬಳಿ ನಡೆದಿದೆ.
ಆರೋಪಿಯನ್ನು ಚಾಮರಾಜನಗರ ಉಪಕಾರಾಗೃಹದಿಂದ ತಮಿಳುನಾಡಿನ ಸತ್ಯಮಂಗಲಂ ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಈ ಘಟನೆ ನಡೆದಿದೆ.
ಮೇಗಲಹುಂಡಿಯ ಸುರೇಶ್ (28) ಎಂಬಾತ ಪರಾರಿಯಾದ ವ್ಯಕ್ತಿ. ಹಾಸನೂರು ಬಳಿ ಟೀ ಕುಡಿಯುವ ವೇಳೆ ಆರೋಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.





