ಪುತ್ತೂರು: ಸರಕಾರಿ ಆಸ್ಪತ್ರೆಯ ಕಟ್ಟಡದ ಮೇಲೆ ಉರುಳಿ ಬಿದ್ದ ಬೃಹತ್ ಮರ: ತಪ್ಪಿದ ಭಾರೀ ಅನಾಹುತ
ಪುತ್ತೂರು: ಪುತ್ತೂರು ನಗರದ ಮಧ್ಯೆ ಇರುವ ಸರಕಾರಿ ಆಸ್ಪತ್ರೆಯ ಕಟ್ಟಡದ ಮೇಲೆ ಬೃಹತ್ ಮರ ಉರುಳಿ ಬಿದ್ದ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಜನ ಸಂಚಾರ ವಿರಳವಾಗಿದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.
ಆಸ್ಪತ್ರೆಯ ಆಡಳಿತ ಕಚೇರಿ ಮತ್ತು ಸೆಕ್ಯುರಿಟಿ ರೂಂ ಇರುವ ಕಟ್ಟಡದ ಮೇಲೆ ಬುಡ ಸಮೇತ ಮರ ನೆಲಕ್ಕುರುಳಿದೆ.
ಮರ ಕೊಂಚ ವಾಲಿ ಇನ್ನೊಂದು ಭಾಗಕ್ಕೆ ಬಿದ್ದಿದ್ದರೆ ಭಾರೀ ಅನಾಹುತ ನಡೆಯುವ ಸಾಧ್ಯತೆ ಇತ್ತು.





