December 15, 2025

ಮಂಗಳೂರು: ರಿಕ್ಷಾದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ: ಮೂವರು ಆರೋಪಿಗಳು ಪೊಲೀಸರ ವಶಕ್ಕೆ

0
image_editor_output_image1220565883-1690809988700.jpg

ಮಂಗಳೂರು: ಗಾಂಜಾವನ್ನು ರಿಕ್ಷಾದಲ್ಲಿ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಭಾರತ್‌ ಬೀಡಿ ಕಾಂಪ್ಲೆಕ್ಸ್‌ ಬಳಿಯ ಸೂರಜ್‌ ಮತ್ತು ಡೈಮಂಡ್‌ ಅಪಾರ್ಟಮೆಂಟ್‌ ನಿವಾಸಿ ಗಣೇಶ್‌ (28) , ಡೊಂಗರಕೇರಿ ಭೋಜರಾವ್‌ ಲೇನ್‌ ಕಮಲಾ ನಿವಾಸಿ ರಾಹುಲ್‌ ಗಟ್ಟಿ(25) , ಕುದ್ರೋಳಿ ಸಾಯಿ ಕೃಪ ಉರ್ದು ಶಾಲೆ ಬಳಿಯ ನಿವಾಸಿ ಅಭಿಲಾಷ ಎಸ್‌ ಕರ್ಕೆರಾ (27) ಎಂದು ಗುರುತಿಸಲಾಗಿದೆ.

ಆರೋಪಿಗಳು ಬೋಳೂರು ಪರಿಸರದಲ್ಲಿ ಅಕ್ರಮವಾಗಿ ತಂದಿರುವ ಗಾಂಜಾವನ್ನು ರಿಕ್ಷಾದಲ್ಲಿ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರೆಂಬ ಖಚಿತ ಮಾಹಿತಿ ಮೇರೆಗೆ ಬರ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.

ಆರೋಪಿಗಳಿಂದ 2ಕೆ.ಜಿ 133 ಗ್ರಾಂ ಗಾಂಜಾ ಮತ್ತು ಗಾಂಜಾ ಮಾರಾಟಕ್ಕೆ ಬಳಕೆ ಮಾಡುತ್ತಿದ್ದ ಆಟೋ ರಿಕ್ಷಾ ಮತ್ತು 3 ಮೊಬೈಲ್‌ ಗಳು ಸೇರಿದಂತೆ ಅಂದಾಜು 1,36,000 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಬಗ್ಗೆ ಬರ್ಕೆ ಪೊಲೀಸ್‌ ರಾಣೆಯಲ್ಲಿ ಎನ್‌.ಡಿ.ಪಿ.ಎಸ್‌ ಕಾಯಿದೆ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!