ಸುಬ್ರಹ್ಮಣ್ಯ: ಮನೆಯಲ್ಲಿದ್ದ ಚಿನ್ನ ಕಳವು
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆ ಸಮೀಪ ಇರುವ ಮನೆಯೊಂದರಲ್ಲಿ ಚಿನ್ನ ಕಳವು ಆಗಿರುವ ಪ್ರಕರಣ ಜು.30ರಂದು ನಡೆದಿದೆ.
ಸುಬ್ರಹ್ಮಣ್ಯದ ಕೃಷ್ಣರಾಜ್ ಭಟ್ ಎಂಬವರ ಮನೆಯಲ್ಲಿ ಈ ಪ್ರಕರಣ ನಡೆದಿದೆ.
ಅವರು 4 ದಿನಗಳ ಹಿಂದೆ ಮನೆಗೆ ಬೀಗ ಹಾಕಿ ತೆರಳುತಿದ್ದರು. ಆದರೆ ಭಾನುವಾರ ಸಂಜೆ ಮನೆಗೆ ವಾಪಾಸು ಆದಾಗ ಮನೆಯಲ್ಲಿದ್ದ ಚಿನ್ನ, ಬೆಳ್ಳಿ, ನಗದು ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ಪೊಲೀಸರು ತನಿಖೆ ನಡೆಸುತಿರುವುದಾಗಿ ತಿಳಿದು ಬಂದಿದೆ.





