ಬಂಟ್ವಾಳ: ಸಾಮಗ್ರಿ ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಕುಸಿದು ಬಿದ್ದು ಸಾವು
ಬಂಟ್ವಾಳ: ವ್ಯಕ್ತಿಯೋರ್ವರು ದಿನಸಿ ಸಾಮಗ್ರಿ ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕುಸಿದು ಬಿದ್ದು, ಸಾವನ್ನಪ್ಪಿದ್ದ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರಿನಲ್ಲಿ ನಡೆದಿದೆ.
ಬೋಳಂಗಡಿ ನಿವಾಸಿ ಮ್ಯಾಕ್ಸಿಂ ಲೋಬೊ (56) ಮೃತ ದುರ್ದೈವಿ.
ಮ್ಯಾಕ್ಸಿಂ ಲೋಬೊ ಅವರು ಮನೆಯಿಂದ ನಡೆದುಕೊಂಡು ಮೆಲ್ಕಾರಿಗೆ ಹೋಗಿ ಅಲ್ಲಿಂದ ಮನೆಗೆ ಹೋಗುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆದರೆ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದು ಎಂದು ತಿಳಿಸಿದ್ದಾರೆ.
ಮ್ಯಾಕ್ಸಿಂ ಲೋಬೊ ಅವರು ತುಂಬೆ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಉದ್ಯೋಗದಲ್ಲಿದ್ದರು.





