ಮಂಗಳೂರಿನಲ್ಲಿ ರಾಜ್ಯಮಟ್ಟದ ಭಾವೈಕ್ಯತಾ ಸಮ್ಮಿಲನ – ಕವಿಗೋಷ್ಠಿ: ಯು.ಟಿ.ಖಾದರ್ ರವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ಭಾವೈಕ್ಯತಾ ಪರಿಷತ್ ಆಯೋಜಿಸಿದ ಭಾವೈಕ್ಯತಾ ಸಮ್ಮಿಲನ ಸಮಾರಂಭವು ಜುಲೈ.30ರಂದು ಮಂಗಳೂರಿನ ಕಂಕನಾಡಿ ಜೆಪ್ಪು ಮರಿಯಾ ಸಭಾಂಗಣದಲ್ಲಿ ಪೂರ್ವಾಹ್ನ 9-30 ರಿಂದ ಮಧ್ಯಾಹ್ನ 3 ರವರೆಗೆ ನಡೆಯಲಿದೆ.
ಕರ್ನಾಟಕ ಭಾವೈಕ್ಯತಾ ಪರಿಷತ್ ಅಧ್ಯಕ್ಷರಾದ ಕೆ.ಎಂ.ಇಕ್ಬಾಲ್ ಬಾಳಿಲ ಅವರ ಅದ್ಯಕ್ಷತೆಯಲ್ಲಿ ನಾಡಿನ ನೂರು ಕವಿಗಳ ಕವನ ವಾಚನ , ಸೌಹಾರ್ದ ಗೀತೆ ಬಿಡುಗಡೆ , ಚರ್ಚಾ ಗೋಷ್ಠಿ , ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದ ಉದ್ಘಾಟನೆಯನ್ನು ನ್ ಚಿತ್ರ ನಿರ್ದೇಶಕ , ಗಾಯಕ ಮತ್ತು ಸಂಘಟಕರಾದ ಎಚ್ .ಭೀಮರಾವ್ ವಾಷ್ಠರ್ ಕೋಡಿಹಾಳ ರವರು ನೆರವೇರಿಸಲಿದ್ದಾರೆ .
ಹವ್ಯಾಸಿ ಪತ್ರಕರ್ತ ಕೆ.ಎ. ಅಬ್ದುಲ್ ಅಝೀಝ್ ಪುಣಚ ಸಂದೇಶ ಭಾಷಣ ಮಾಡುವರು.
ವಿಶೇಷ ಆಹ್ವಾನಿತರಾಗಿ ಆಗಮಿಸುವ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು.ಟಿ. ಖಾದರ್ ಅವರಿಗೆ 2023 ನೇ ಸಾಲಿನ “ಭಾವೈಕ್ಯತಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗುವದು.
ಇದೇ ಸಂದರ್ಭದಲ್ಲಿ ಸುಳ್ಯದ ಸಾಹಿತಿ ಜ್ಯೋತಿಷಿಗಳಾದ ಎಚ್ .ಭೀಮರಾವ್ ವಾಷ್ಠರ್ ಸಾಹಿತ್ಯ ರಚಿಸಿ ಹಾಡಿರುವ ಸೌಹಾರ್ದ ಸಂಗಮ ಎಂಬ ಭಾವೈಕ್ಯತಾ ಗೀತೆಯನ್ನು ವಿಧಾನಸಭಾ ಅಧ್ಯಕ್ಷರಾದ ಯು.ಟಿ. ಖಾದರ್ ಬಿಡುಗಡೆ ಮಾಡಲಿದ್ದಾರೆ.
ವಿವಿಧ ಧರ್ಮಗಳ ಸಮ್ಮಿಲನದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕವಿಗಳಿಗೂ ಭಾವೈಕ್ಯತಾ ಕಾವ್ಯಸಿರಿ ಪ್ರಶಸ್ತಿ ನೀಡಿ ಸತ್ಕರಿಸಲಾಗುವುದು ಎಂದು ಕರ್ನಾಟಕ ಭಾವೈಕ್ಯತಾ ಪರಿಷತ್ ನ ಸಂಚಾಲಕ ಅಬೂಬಕರ್ ಅನಿಲಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .





