February 2, 2026

ದಕ್ಷಿಣ ಕೊರಿಯಾ ವಿಶ್ವ ಜಾಂಬೂರಿಯಲ್ಲಿ ಭಾಗವಹಿಸಲಿರುವ ವಿಠ್ಠಲ್ ಜೇಸೀಸ್ ಶಾಲಾ ವಿದ್ಯಾರ್ಥಿಗಳು

0
image_editor_output_image970059166-1690267723999.jpg

ವಿಟ್ಲ: ವಿವಿಧ ದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಆಗಸ್ಟ್ 1ರಿಂದ 12ರ ವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಸ್ಕೌಟ್ & ಗೈಡ್ ವಿಶ್ವ ಜಾಂಬೂರಿ ಉತ್ಸವಕ್ಕೆ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಇಬ್ಬರು ವಿದ್ಯಾರ್ಥಿಗಳಾದ ಸೃಜನಾ ರೈ ಎ 10 ನೇ ತರಗತಿ (ಶ್ರೀಮತಿ ಸವಿತಾ ಕೆ ಹಾಗೂ ಶ್ರೀ ಸತೀಶ ಕುಮಾರ್ ಎ ರವರ ಪುತ್ರಿ ) ಮತ್ತು ಅನಿಶ್ ಕೃಷ್ಣ ಆಚಾರ್ 10 ನೇ ತರಗತಿ (ಶ್ರೀಮತಿ ಮಮತಾ ಎಸ್ ಹಾಗೂ ಶ್ರೀ ಎಂ ಶ್ರೀನಿವಾಸ್ ಆಚಾರ್ ರವರ ಪುತ್ರ) ಆಯ್ಕೆಗೊಂಡಿದ್ದಾರೆ.

ಜುಲೈ 31ರಂದು ದಕ್ಷಿಣ ಕನ್ನಡ ತಂಡದ 46 ವಿದ್ಯಾರ್ಥಿಗಳು ಮತ್ತು 5 ಶಿಕ್ಷಕರು ಮಂಗಳೂರಿನಿಂದ ಬೆಂಗಳೂರು ಮತ್ತು ಹಾಂಕಾಂಗ್ ಮೂಲಕ ದಕ್ಷಿಣ ಕೊರಿಯಾಕ್ಕೆ ತೆರಳಿ, ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಶಾಲಾ ಸ್ಕೌಟ್ & ಗೈಡ್ ತರಬೇತುದಾರರಾದ ಜಯಶ್ರೀ ಯವರು ತರಬೇತುಗೊಳಿಸಿದ್ದಾರೆ ಎಂದು ಶಾಲಾ ಪ್ರಾಂಶುಪಾಲರಾದ ಶ್ರೀ ಜಯರಾಮ ರೈ ಯವರು ತಿಳಿಸಿದ್ದಾರೆ. ಪ್ರತಿನಿಧಿಸುವ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಶಿಕ್ಷಕ – ಶಿಕ್ಷಕೇತರ ವೃಂದ ಶುಭಹಾರೈಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!