February 2, 2026

ಮಂಗಳೂರು: ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ, ಲಕ್ಷಾಂತರ ರೂ. ಮೌಲ್ಯದ MDMA ವಶ

0
image_editor_output_image604807225-1690265855974.jpg

ಮಂಗಳೂರು: ಡ್ರಗ್ಸ್‌ ಮುಕ್ತ ಮಂಗಳೂರು ಅಭಿಯಾನ ಹಮ್ಮಿಕೊಂಡಿರುವ ಮಂಗಳೂರಿನ ಪೊಲೀಸರು ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದವನನ್ನು ಮಾದಕ ವಸ್ತು ಸಹಿತ ಒಟ್ಟು 1,35,500 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಮಂಗಳೂರು ನಗರದ ನಿಡ್ಡೇಲ್‌ ಗೋಕರ್ಣ ರಸ್ತೆಯ ವಿ.ಎಚ್.ಜೆ. ಕಂಪೌಂಡ್‌ ನಿವಾಸಿ ಹರ್ಷಿತ್ ಶೆಟ್ಟಿ(29) ಬಂಧಿತ ಅರೋಪಿ.

ಆರೋಪಿ ಹರ್ಷಿತ್ ಶೆಟ್ಟಿ ಬೆಂಗಳೂರಿನಿಂದ ಎಂಡಿಎಂಎ ಖರೀದಿಸಿ ಮಂಗಳೂರಿಗೆ ತಂದು ಪಡೀಲ್ ಕೆಂಬಾರ್ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ. ಎ. ಹೆಗಡೆ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದರು.

Leave a Reply

Your email address will not be published. Required fields are marked *

error: Content is protected !!