ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ
ಬೆಂಗಳೂರು: ಪ್ರೀತಿಸಿದ ಯುವತಿ ಕೈಕೊಟ್ಟ ಹಿನ್ನೆಲೆ ಯುವಕ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಎಸ್‌ಜೆ ನಗರದಲ್ಲಿ ನಡೆದಿದೆ.
ನವೀನ್ ಆತ್ಮಹತ್ಯೆಗೆ ಶರಣಾದ ಭಗ್ನ ಪ್ರೇಮಿ. ಮೂಲತಃ ಚಾಮರಾಜನಗರ ನಿವಾಸಿಯಾದ ನವೀನ್ ಬದುಕು ರೂಪಿಸಿಕೊಳ್ಳುವ ಸಲುವಾಗಿ ಕುಟುಂಬದವರೇ ಬಾಳೆಕಾಯಿ ಮಂಡಿ ಹಾಕಿಕೊಟ್ಟಿದ್ದರು.
ಈ ವೇಳೆ ನವೀನ್‌ಗೆ ಯುವತಿಯೊಬ್ಬಳು ಪರಿಚಯವಾಗಿ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿದೆ. ಇಬ್ಬರೂ ಪರಸ್ಪರ ಕೈ ಕೈ ಹಿಡಿದುಕೊಂಡು ಸುತ್ತಾಡಿ ಮದುವೆಯ ಕನಸು ಕೂಡಾ ಕಂಡಿದ್ದರು.




