March 23, 2026

ಕಾಸರಗೋಡು: ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

0
image_editor_output_image-666296068-1690213446956.jpg


 
ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಮಾಡತ್ತಡ್ಕದಲ್ಲಿ ನಡೆದಿದೆ.

ಮಾಡತ್ತಡ್ಕದ ರಶ್ಮಿತಾ (14) ಮೃತ ಪಟ್ಟವರು.

ಬದಿಯಡ್ಕ ನವ ಜೀವನ ಹಯರ್ ಸೆಕೆಂಡರಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿಯಾಗಿದ್ದ ರಶ್ಮಿತಾ ಭಾನುವಾರ ಮನೆಯಿಂದ ಹೊರಗಡೆ ತೆರಳಿ ನಾಪತ್ತೆಯಾಗಿದ್ದು, ಮನೆಯವರು ಹುಡುಕಾಟ ನಡೆಸಿದಾಗ ಮನೆಯಿಂದ ಅಲ್ಪ ದೂರದ ಮರವೊಂದರ ರೆಂಬೆಯಲ್ಲಿ ನೇಣು ಬಿಗಿದು ಮೃತ ಪಟ್ಟಿರುವುದು ಪತ್ತೆಯಾಗಿದೆ.

ಈ ಬಗ್ಗೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!