ಉಳ್ಳಾಲ: ಮುಡಿಪು ಜಂಕ್ಷನ್‌ನಲ್ಲಿ ಬಸ್-ಕಾರು ನಡುವೆ ಅಪಘಾತ: ಪವಾಡಸದೃಶ ಕಾರು ಚಾಲಕ ಪಾರು
ಉಳ್ಳಾಲ: ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಮುಡಿಪು ಜಂಕ್ಷನ್ನಿನಲ್ಲಿ ಇಂದು ರಾತ್ರಿ ವೇಳೆ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಮಂಗಳೂರಿನಿಂದ ಬಿ.ಸಿ ರೋಡಿನತ್ತ ತೆರಳುತ್ತಿದ್ದ ಎನ್.ಎಸ್ ಟ್ರಾವೆಲ್ಸ್ ಬಸ್ಸು ಮುಡಿಪು ಜಂಕ್ಷನ್ನಿನಲ್ಲಿ ತಿರುಗುವ ಸಂದರ್ಭ, ಭಾರತಿ ಶಾಲೆ ಕಡೆಯಿಂದ ಬರುತ್ತಿದ್ದ ಝೆನ್ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಬಸ್ಸು ಮುಂಭಾಗಕ್ಕೆ ಕಾರು ಒಳನುಗ್ಗಿದ್ದು, ಕಾರು ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.”




