March 13, 2026

ಬಂಟ್ವಾಳದಲ್ಲಿ ಧಾರಾಕಾರ ಮಳೆ: ಹಲವೆಡೆ ಮನೆಗಳಿಗೆ ಹಾನಿ

0
image_editor_output_image-1351545618-1690101629753.jpg

ಬಂಟ್ವಾಳ: ಬಂಟ್ವಾಳದಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಹಲವೆಡೆ ಹಾನಿ ಸಂಭವಿಸಿದೆ.

ಪುದು ಗ್ರಾಮದ ಸುಜೀರು ಬದಿಗುಡ್ಡೆಯಲ್ಲಿ ಅಬೂಬಕ್ಕರ್ ಸಿದ್ದಿಕ್ ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದ್ದು, ಮನೆಯವರು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.

ಬಂಟ್ವಾಳ ಸಮೀಪದ ಲೊರೆಟ್ಟೋದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು.

ಕುರಿಯಾಳ ದುರ್ಗಾನಗರ ನಿವಾಸಿ ಅಪ್ಪಿ ಮೂಲ್ಯ, ಬಡಗಬೆಳ್ಳೂರು ಗ್ರಾಮದ ಬಾಳಿಕೆಯಲ್ಲಿ ವಾಮದೇವ, ವಿಟ್ಲಮುಡ್ನೂರಿನ ಮೂಡಾಯಿಮಾರುನಲ್ಲಿ ಸತೀಶ್ ಶೆಟ್ಟಿ ಅವರ ಕೊಟ್ಟಿಗೆ, ಅಳಿಕೆಯ ಕಾನತ್ತಡ್ಕದ ರಝಕ್, ನರಿಕೊಂಬು ಗ್ರಾಮದ ಶಾರದಾ ನೀಲಪ್ಪ, ವೀರಕಂಭ ಗ್ರಾಮದ ಮಜ್ಜೋನಿಯಲ್ಲಿ ಭಾಗಿ, ಅಮ್ಮುಂಜೆ ಗ್ರಾಮದ ಕೊರಗಪ್ಪ, ನರಿಕೊಂಬು ಗ್ರಾಮದ ಕರ್ಬೆಟ್ಟುನಲ್ಲಿ ಬಾಬು ಪೂಜಾರಿ ಅವರ ಮನೆಗಳಿಗೆ ಮರ, ತೆಂಗಿನಮರ ಬಿದ್ದು ಹಾನಿಯಾಗಿದೆ.

Leave a Reply

Your email address will not be published. Required fields are marked *

error: Content is protected !!