March 13, 2026

ನೀರಿನ ಟ್ಯಾಂಕ್ ಗೆ ಬಿದ್ದು ಬಾಲಕರಿಬ್ಬರು ಸಾವು

0
image_editor_output_image2102905483-1690092820999.jpg

ಕಲಬುರಗಿ: ನಿರ್ಮಾಣ ಹಂತದ ನೀರಿನ ಟ್ಯಾಂಕ್ ನಲ್ಲಿ ಬಾಲಕರಿಬ್ಬರು ಮುಳುಗಿ ಬಾಲಕರಿಬ್ಬರು ಮೃತಪಟ್ಟ ಘಟನೆ ನಗರದ ದುಬೈ ಕಾಲೋನಿಯಲ್ಲಿ ನಡೆದಿದೆ.

ವಾಟರ್ ಟ್ಯಾಂಕ್ ನಿರ್ಮಾಣದ ಹೊಂಡದಲ್ಲಿ ಅಜಯ (12 ವ), ಅಭಿಷೇಕ್ (13 ವ) ಎನ್ನುವ ಬಾಲಕರಿಬ್ಬರು ಮೃತಪಟ್ಟಿದ್ದಾರೆ. ಬಾಲಕರು ಆಟವಾಡುತ್ತಾ ಹೋಗಿ ನೀರಲ್ಲಿ ಮುಳುಗಿದ್ದಾರೆ.

ವಾಟರ್ ಟ್ಯಾಂಕ್ ನಿರ್ಮಾಣಕ್ಕಾಗಿ ಎಲ್ & ಟಿ ಕಂಪನಿಯವರು ಬೃಹತ್ ಹೊಂಡ ಅಗೆದಿದ್ದಾರೆ. ಟ್ಯಾಂಕ್ ನ ನಿರ್ಮಾಣಕ್ಕಾಗಿ ಒಂದು ವರ್ಷದಿಂದ ಅಗೆಯಲಾಗಿದೆ. ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೊಂಡದ ಸುತ್ತ ತಂತಿ ಬೇಲಿ ಸಹ ನಿರ್ಮಿಸಿಲ್ಲ. ಎಲ್ ಆ್ಯಂಡ್ ಟಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!