March 13, 2026

ಮುಲ್ಕಿ: ಮಟ್ಕಾ ಜೂಜಾಟ: ಮೂವರ ಬಂಧನ, ಐವರ ವಿರುದ್ದ ಪ್ರಕರಣ ಕೇಸು ದಾಖಲು

0
IMG-20230504-WA0062.jpg

ಮುಲ್ಕಿ: ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಎಂಬಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದು ಐವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.

ಬಸವರಾಜ, ಮಳಸಿದ್ದಪ್ಪ, ಭೀಮರಾಯ, ನವೀನ್ ಮತ್ತು ಬಂದೇ ನವಾಜ್ ಐವರು ಆರೋಪಿಗಳಾಗಿದ್ದು, ಈ ಪೈಕಿ ಬಸವರಾಜ, ಮಳಸಿದ್ದಪ್ಪ, ಭೀಮರಾಯ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾರ್ವಜನಿಕರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಜೂಜಾಟಕ್ಕೆ ಸಂಗ್ರಹಿಸಿದ ಒಟ್ಟು ಹಣ ರೂ 1,680 ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಐದು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!