March 24, 2026

ಕಾಸರಗೋಡು: ತಾಯಿ ಮನೆಯಲ್ಲಿ ನೇಣಿಗೆ ಶರಣಾದ ವಿವಾಹಿತೆ ಮಹಿಳೆ

0
dead-4-1.jpg

ಕಾಸರಗೋಡು: ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಬೇಳದಲ್ಲಿ ನಡೆದಿದೆ. ಬೇಳ ವಿ.ಎಂ. ನಗರದ ದಾಮೋದರರವರ ಪುತ್ರಿ ಅಶ್ವತಿ(25) ಮೃತ ಪಟ್ಟವರು.

ಸೋಮವಾರ ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕೃತ್ಯ ನಡೆದಿದೆ. ಮನೆ ಸಮೀಪದ ಬೀಡಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುವ ತಾಯಿ ಸುಜಾತ ಮಧ್ಯಾಹ್ನ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಗಿಲು ಬಡಿದರೂ ತೆರೆಯದಿದ್ದುರಿಂದ ಪರಿಸರದ ಮನೆಯವರಿಗೆ ಮಾಹಿತಿ ನೀಡಿದ್ದು, ಬಾಗಿಲು ತೆರೆದು ನೋಡಿದಾಗ ನೇಣುಬಿಗಿದಿರುವುದು ಕಂಡು ಬಂದಿದೆ. ಅಶ್ವತಿ ಕಣ್ಣೂರಿನಲ್ಲಿ ವಸ್ತ್ರ ದಂಗಡಿ ನೌಕರಿ ಯಾಗಿದ್ದು, ಎರಡು ದಿನಗಳಿಂದ ರಜೆಯಲ್ಲಿದ್ದಳು. ಪತಿ ಮನೋಹರ್ ವಿದೇಶ ದಲ್ಲಿ ಉದ್ಯೋಗ ದಲ್ಲಿ ದ್ದಾರೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!