February 4, 2026

ಪಣಂಬೂರು: ರಸ್ತೆ ಅಪಘಾತಕ್ಕೆ ಸ್ಕೂಟರ್‌ ಸವಾರ ಸಾವು

0
image_editor_output_image-1603385609-1689676990240.jpg

ಮಂಗಳೂರು: ನಗರ ಹೊರವಲಯದ ಪಣಂಬೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತಕ್ಕೆ ಸ್ಕೂಟರ್‌ ಸವಾರರೊಬ್ಬರು ಬಲಿಯಾಗಿದ್ದಾರೆ.

ಮೃತರನ್ನು ತೋಕೂರು ನಿವಾಸಿ ಟೈಟಸ್‌ ಫೆರಾವೊ (60) ಎಂದು ಗುರುತಿಸಲಾಗಿದೆ.

ಸ್ಕೂಟರ್‌ ಚಲಾಯಿಸಿಕೊಂಡು ಹೋಗುತ್ತಿದ್ದಾಗ ರಸ್ತೆಯ ಹೊಂಡಕ್ಕೆ ಬಿದ್ದಿದ್ದು, ಈ ಸಂದರ್ಭದಲ್ಲಿ ಸವಾರನೂ ರಸ್ತೆಗೆ ಬಿದ್ದಿದ್ದಾರೆ.

ಟೈಟಸ್‌ ಅವರು ಸ್ಕೂಟರ್‌ ಚಲಾಯಿಸಿಕೊಂಡು ಪಣಂಬೂರು ಕಡೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಹೊಂಡ ಇದ್ದ ಕಾರಣ ಸ್ಕೂಟರಿನ ಚಾಲನೆಯನ್ನು ನಿಧಾನ ಮಾಡಿದಾಗ ಹಿಂಬದಿಯಿಂದ ವೇಗವಾಗಿ ಬಂದ ಸರಕು ತುಂಬಿದ ಲಾರಿ ಸ್ಕೂಟರ್‌ ಗೆ ಢಿಕ್ಕಿ ಹೊಡೆದಿದೆ.

ಬಳಿಕ ಸ್ಕೂಟರ್‌ ಮತ್ತು ಸವಾರ ಟೈಟಸ್‌ ಅವರನ್ನು ಲಾರಿ ಸುಮಾರು 100 ಅಡಿ ದೂರಕ್ಕೆ ಎಳೆದುಕೊಂಡು ಹೋಗಿದೆ.

Leave a Reply

Your email address will not be published. Required fields are marked *

error: Content is protected !!