March 13, 2026

ಟಿಪ್ಪರ್ ಗೆ ಸಿಲುಕಿದ ಕಾರು: ಕಿಲೋಮೀಟರ್ ಗಟ್ಟಲೆ ದೂರ ಎಳೆದೊಯ್ದ ಭಯಾನಕ ವೀಡಿಯೋ ವೈರಲ್

0
image_editor_output_image1487038230-1689598173574.jpg

ಉಡುಪಿ: ಟಿಪ್ಪರ್ ನ ಡಂಪರ್ ಗೆ ಸಿಲುಕಿದ ಕಾರೊಂದನ್ನು ಕಿಲೋಮೀಟರ್ ಗಟ್ಟಲೆ ದೂರ ಎಳೆದೊಯ್ದ ಭಯಾನಕ ದೃಶ್ಯ ಉಡುಪಿ ಜಿಲ್ಲೆಯ ಪಡುಬಿದ್ರೆ ಹೈವೆಯಲ್ಲಿ ನಡೆದಿದೆ.

ಶಿವಮೊಗ್ಗ ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸ್ಯಾಂಟ್ರೋ ಕಾರು ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್ ನ ಹಿಂಬದಿ ಸಿಲುಕಿ ಹಾಕಿದೆ.

ಅಪಘಾತ ಅರಿವು ಬರುತ್ತಿದ್ದಂತೆ ಹೆದರಿದ ಟಿಪ್ಪರ್ ಚಾಲಕ ವಾಹನದ ವೇಗ ಹೆಚ್ಚಿಸಿದ್ದಾನೆ.

ಸಾರ್ವಜನಿಕರು ಎಳೆದಾಡಿ ಹೊಡೆಯಬಹುದು ಎಂಬ ಆತಂಕದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವೇಗವಾಗಿ ಟಿಪ್ಪರನ್ನು ಓಡಿಸಲಾರಂಭಿಸಿದ್ದಾನೆ.

ಕೊನೆಗೂ ಟಿಪ್ಪರನ್ನು ಹಿಂಬಾಲಿಸಿಕೊಂಡು ಬಂದ ಸಾರ್ವಜನಿಕರು ಟಿಪರನ್ನು ಅಡ್ಡಗಟ್ಟಿ ನಿಲ್ಲಿಸಲು ಯಶಸ್ವಿಯಾಗಿದ್ದು ಟಿಪ್ಪರ್ ಮತ್ತು ಚಾಲಕನನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!